Satvic Annam, Shudha Aharah
Experience the essence of Satvik specialties with VR Caterers.
"ಜೈಸಾ ಅನ್ನ್ - ವೈಸಾ ಮನ್"... ಎನ್ನುತ್ತಾರೆ. ಅನ್ನದಿಂದಲೇ ನಮ್ಮ ಮನಸ್ಸು ಸಾತ್ತ್ವಿಕ - ರಾಜಸಿಕ - ತಾಮಸಿಕ ಎಂದು ನಿರ್ಧಾರ ಆಗುತ್ತದೆ.
ಸ್ವಚ್ಛ - ಸ್ವಸ್ಥ ಆಹಾರ ಪ್ರತಿಯೊಬ್ಬರಿಗೂ ಸಿಗುವಂತಾಗಬೇಕು. ಅಮ್ಮನ ಕೈ ಅಡುಗೆ ಯಾರಿಗೆ ರುಚಿಸುವುದಿಲ್ಲ ಹೇಳಿ?
ಅನ್ನವೇ ಬ್ರಹ್ಮ - ಅನ್ನ ದೇವರು.... ಎಂದೆಲ್ಲ ಹೇಳುವುದು ಆಹಾರದ ಮಹತ್ವವನ್ನು ಸಾರುವುದಕ್ಕಾಗಿಯೇ!
ಷಡ್ರಸೋಪೇತ ಊಟ, ಪಂಚ ಭಕ್ಷ್ಯ ಪರಮಾನ್ನ, ಮಜ್ಜಿಗೆ ಭೂಲೋಕದ ಅಮೃತ, ಕೈ ತೊಳೆದ ಮೇಲೆ ತಾಂಬೂಲ.... ಆಹಾ!!
ಇವು ಆಹಾರದ ವಿಶೇಷತೆಯನ್ನು ತಿಳಿಸುತ್ತವೆ.
ಊಟ ಮಾಡಿದ ಮೇಲಲ್ಲ ; ಆಹಾರದ ಘಮದಿಂದಲೇ ಈ ಅಡುಗೆ ಯಾರು ಮಾಡಿದ್ದು ಎಂಬಷ್ಟರ ಮಟ್ಟಿಗೆ ಕೆಲವರು ಪರಿಣಿತರಿದ್ದಾರೆ.
ನೀವೇಕೆ ನಮ್ಮ ಊಟದ ಪರಿಮಳವನ್ನು - ಸ್ವಾದವನ್ನು ಸವಿಯಬಾರದು?!
ಒಮ್ಮೆ ಭೇಟಿ ಕೊಡಿ......